ಕೇವಲ ರಾಜಕೀಯ ನಾಯಕರಾಗಿರದೇ ಬಡವರ ಹಿಂದುಳಿದವರ ನಾಯಕರಾಗಿದ್ದವರು ಅರಸು - ಸಿ.ಡಿ.ಚಂದ್ರಶೇಖರ್

ಚಿಕ್ಕನಾಯಕನಹಳ್ಳಿ : ರಾಜಕೀಯವಾಗಿ ರಾಜ್ಯದ ಮುಖ್ಯಮಂತ್ರಿ ಎಂದು ಅಷ್ಟೇ ನಾವು ದೇವರಾಜ ಅರಸುರವರನ್ನು ನೆನಪು ಮಾಡಿಕೊಳ್ಳುವುದಿಲ್ಲ ಅವರು ನಮ್ಮ ನಾಡಿನ ಹಿಂದುಳಿದ ವರ್ಗಗಳ ಹಾಗೂ ಬಡವರ ಪಾಲಿನ ದೇವರಾಗಿದ್ದಾರೆ ಅವರ ಅನೇಕ ಸುಧಾರಣಾ ಕಾರ್ಯಕ್ರಮಗಳು ಇಂದು ಮಾತನಾಡುತ್ತಿವೆ ಎಂದು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ಹಿಂದುಳಿದವರ್ಗಗಳ ಕಲ್ಯಾಣ ಇಲಾಕೆಯವತಿಯಿಂದ ಏರ್ಪಡಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ರವರ ೧೧೦ನೇ ವರ್ಷದ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭೂ ಸುದಾರಣೆ ಕಾಯ್ದೆ ಸೇರಿದಂತೆ ಬಡವರಿಗೆ ವಿವಿಧ ಮಾಸಾಶನಗಳನ್ನು ಪ್ರಾರಂಭಮಾಡಿದವರು ಅರಸು ರವರು. ಅವರು ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದವರು ಅವರನ್ನು ನೆನಪು ಮಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ ಅವರು ನಾಡಿನ ಜನತೆಗೆ ತಂದ ಅನೇಕ ಯೋಜನೆಗಳನ್ನು ತಂದರು ಅವರ ಅಂತಿಮ ದಿನಗಳು ಮಾತ್ರ ಚೆನ್ನಾಗಿರಲಿಲ್ಲ ಅದರು ಅವರ ಸಾಧನೆಗಳು ಹಾಗೂ ಅವರ ಆಡಳಿತವನ್ನು ನಾವು ಅದರ್ಶವಾಗಿ ನೋಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ದಲಿತಸಂಘರ್ಷಸಮಿತಿ ಸಂಚಾಲಕ ಲಿಂಗದೇವರು, ರಾಜ್ಯ ಮಾದಿಗದಂಡೋರದ ಪ್ರಧಾನ ಕಾರ್ಯದರ್ಶಿ ಬೆವಿನಹಳ್ಳಿ ಚನ್ನಬಸವಯ್ಯ, ಮುಖಂಡರುಗಳಾದ ಗೋ.ನಿ.ವಸಂತ್‌ಕುಮಾರ್, ಕೃಷ್ಣಮೂರ್ತಿ, ಅಗಸರಹಳ್ಳಿ ನರಸಿಂಹಮೂರ್ತಿ, ರಂಗನಾಥ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಭಾಗ್ಯಮ್ಮ ಸೇರಿದಂತೆ ಬಿಇಒ ಕಾಂತರಾಜು, ಸಿಡಿಪಿಒ ಹೊನ್ನಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

79

© ಹುಳಿಯಾರು ಸಮಗ್ರ ಸುದ್ಧಿ . All Rights Reserved.