ಹುಳಿಯಾರು : ರಾಜ್ಯಾಧ್ಯಂತ 2025-26 ನೇ ಸಾಲಿಗೆ ಶಾಲೆಗಳು ಪ್ರಾರಂಭವಾಗಿದ್ದು ಬೇಸಿಗೆ ರಜೆ ಮುಗಿಸಿ ಶಾಲೆಗೆ ಬಂದ ಮಕ್ಕಳನ್ನು ವಿಶೇಷವಾಗಿ ಸ್ವಾಗತ ಕೋರಿದ್ದಾರೆ ಪಟ್ಟಣದ ವಸಂತನಗರದಲ್ಲಿರುವ ವಾಸವಿ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಂದ ವೃಂದ.
ಶಾರದಾ ದೇವಿ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ಮಕ್ಕಳಿಗೆ ಶಾರದಾ ದೇವಿಯ ವೇಷ ಭೂಷಣ ಹಾಕಿಸಿ, ಶಾಲೆಗೆ ಬಂದ ಮಕ್ಕಳಿಗೆ ಆರತಿ ಎತ್ತಿ ಬರಮಾಡಿಕೊಳ್ಳುವುದರ ಮೂಲಕ ಶಾಲೆಗೆ ಸ್ವಾಗತ ಕೋರಿದರು.
ಈ ಸಂದರ್ಭ ದಲ್ಲಿ ಮಾತನಾಡಿದ ವಿದ್ಯಾ ಸಂಸ್ಥೆಯ ಅದ್ಯಕ್ಷರಾದ ಟಿ. ಎಲ್. ಬಾಲೇಶ್ ಈ ಬಾರಿ ಎಸ್ ಎಸ್ ಎಲ್ ಎಲ್ ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆ ಶೇಕಡಾ 100 ಫಲಿತಾಂಶ ಪಡೆದಿದೆ ಹಾಗೂ ತಾಲೂಕಿನಲ್ಲಿ ಶೇ. 100 ಫಲಿತಾಂಶ ಪಡೆದ ಏಕೈಕ ಶಾಲೆಯಾಗಿರುವುದು ತುಂಬಾ ಸಂತೋಷದ ವಿಚಾರ ಅದೇ ರೀತಿ ಈ ಸಾಲಿನಲ್ಲೂ ಕೂಡ ನಮ್ಮ ಶಾಲೆಯ ಮಕ್ಕಳು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಫಲಿತಾಂಶದಲ್ಲೂ ಕೂಡ ಪ್ರಗತಿ ಸಾಧಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಟಿ. ಎನ್. ಅಜಯ್, ಎಂ. ಎನ್. ಕಾರ್ತಿಕ್ ಮುಖ್ಯ ಶಿಕ್ಷಕರಾದ ಎಸ್ ಎನ್ ಪ್ರಕಾಶ್, ಬಿ ಎಸ್ ಸುಧಾ, ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.