ತಾಲೂಕು ಆಡಳಿತದಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ.

ಚಿಕ್ಕನಾಯಕನಹಳ್ಳಿ : ಶ್ರೀ ಕೃಷ್ಣ ಪರಮಾತ್ಮ ಮಹಾಭಾರತದಲ್ಲಿ ಹೇಳಿರುವಂತೆ ನಮ್ಮ ಕಾರ್ಯವನ್ನು ನಾವು ಪ್ರಾಮಾಣಿಕವಾಗಿ ಮಾಡಿದರೆ ಅದರ ಫಲಾಪಲಗಳು ಸರಿಯಾದ ರೀತಿಯಲ್ಲಿರುತ್ತವೆ ಅವರ ಜೀವನವೇ ನಮಗೆ ಆದರ್ಶ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತಸೌಧದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಕೃಷ್ಣ ಜಯಂತೋತ್ಸವಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಶ್ರೀಕೃಷ್ಣ ಪರಮಾತ್ಮ ಸರ್ವಾಂತರಯಾಮಿ ಆತನು ಎಲ್ಲಾ ಕಡೆಗಳಲ್ಲು ಇದ್ದಾರೆ ಎಂಬುದಕ್ಕೆ ಕನಕದಾಸರಿಗೆ ಅವರು ಉಡುಪಿಯಲ್ಲಿ ದರ್ಶನ ನೀಡಿದನ್ನು ನಾವು ಕಾಣಬಹುದು ಸಮಾಜದಲ್ಲಿನ ಕೆಟ್ಟತನವನ್ನು ಹೋಗಲಾಡಿಸುವುದಕ್ಕೆ ಮಹಾಭಾರತದಲ್ಲಿ ಅವರ ಅದರ್ಶಗಳು ನಮ್ಮ ಜೀವನಕ್ಕೆ ಆಳವಡಿಸಿಕೊಳ್ಳಬೇಕಾಗಿದೆ ಎಂದರು.

38

© ಹುಳಿಯಾರು ಸಮಗ್ರ ಸುದ್ಧಿ . All Rights Reserved.